ವಿಂಡೌಸ್, ಅಡಾಲ್ಫ್
	1876-1959. ಜರ್ಮನ್ ರಸಾಯನವಿe್ಞÁನಿ, ಸಂಶೋಧನ ಕ್ಷೇತ್ರ ಜೀವಸತ್ತ್ವಗಳು ಮತ್ತು ಸ್ಟೀರಾಯ್ಡ್‍ಗಳು. 1930ರಲ್ಲಿ  ಫ್ರೀಬರ್ಗ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದ ಅನಂತರ ಗಾಟಿಂಗೆನ್‍ನಲ್ಲಿ ಪ್ರಾಧ್ಯಾಪಕನಾಗಿ ಸೇವೆ. ವೈದ್ಯನಾಗಲು ಬಯಸಿದ ಈತ ರಸಾಯನ ವಿe್ಞÁನಿಯಾದ. ಇದಕ್ಕೆ ಕಾರಣ ಒಂದು ವರ್ಷ ಎಮಿಲ್ ಫಿಷರ್ (1852-1919) ಜೊತೆಗಿನ ಒಡನಾಟ. ನಮ್ಮ ದೇಹದಲ್ಲೇ ಹುಟ್ಟುವ  ಕೆಲವು ರಾಸಾಯನಿಕಗಳು ನಮಗೆ ಒಗ್ಗದೆ ಉಪಟಳ ಕೊಡುವುದುಂಟು. ಇಂಥ ಅಲರ್ಜಿ ಲಕ್ಷಣಗಳಿಗೆ ಕಾರಣ ಹಿಸ್ಟಮೀನ್‍ಗಳು. ಇವನ್ನು ಪತ್ತೆ ಹಚ್ಚಿದಾತ ಈತ. ಸ್ಟೀರಾಯ್ಡ್‍ಗಳೆಂಬ ಒಂದು ಬಗೆಯ ರಾಸಾಯನಿಕಗಳಿವೆ. ಕೊಲಸ್ಟಿರಾಲ್ ಈ ಪೈಕಿ ಒಂದು. ಇದರ ಅಣುರಚನೆಯನ್ನು ವಿಂಡೌಸ್ ಪತ್ತೆ ಹಚ್ಚಿದ. ಕೆಲವು ಸ್ಟೀರಾಯ್ಡ್‍ಗಳು ನೇರಳಾತೀತ ಕಿರಣಗಳ (ಸೂರ್ಯರಶ್ಮಿಯಲ್ಲಿವೆ) ಪ್ರಭಾವಕ್ಕೊಳಗಾಗಿ ಅಣುವಿನ ಒಂದು ಬಂಧ ಒಡೆದು ಜೀವಸತ್ತ್ವ ಉತ್ಪತ್ತಿಯಾಗುವುದೆಂದು ಪ್ರಯೋಗದಿಂದ ಖಚಿತಪಡಿಸಿದ. ಹಾಲು ಮತ್ತು ಬ್ರೆಡ್‍ಗಳಂಥ ಆಹಾರ ಪದಾರ್ಥಗಳ ಜೀವಸತ್ತ್ವ ಡಿ ಅಂಶವನ್ನು ಹೀಗೆ ಹೆಚ್ಚಿಸಬಹುದೆಂದು ರುಜುವಾತಾಯಿತು. ಈ ವಿಶಿಷ್ಟ ಶೋಧಗಳಿಗಾಗಿ ಇವನಿಗೆ 1928ರ ಸಾಲಿನ ನೊಬೆಲ್ ಪ್ರಶಸ್ತಿ ದಕ್ಕಿತು. ಜೀವಸತ್ತ್ವ ಸಂಕೀರ್ಣದಲ್ಲಿ ಒಂದಾದ ಥಯಮೀನ್‍ನ ಅಣುವಿನಲ್ಲಿ ಗಂಧಕವಿದೆಯೆಂದೂ ತೋರಿಸಿದ್ದು ಈತನೇ.	
(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ